ಸಚಿವೆ ನಿರ್ಮಲಾ ಸೀತಾರಾಮನ್ ಭಾರತದಲ್ಲಿ ನಂ. 1 ಶಕ್ತಿಶಾಲಿ ಮಹಿಳೆ ಎಂದು ಘೋಷಿಸಲಾಗಿದೆ.2ನೇ, 3ನೇ ಸ್ಥಾನ ಯಾರಿಗೆ?

ಫೋರ್ಬ್ಸ್‌ ಪ್ರಭಾವಿ ಮಹಿಳೆಯರು – 2024:

ಫೋರ್ಬ್ಸ್‌ ಬಿಡುಗಡೆ ಮಾಡಿದ ‘ಮೋಸ್ಟ್‌ ಪವರ್‌ಫುಲ್‌ ವುಮೆನ್‌-2024’ ಪಟ್ಟಿಯಲ್ಲಿ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಹೆಸರುಗಳಿವೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ತಮ್ಮ ಸ್ಥಳವನ್ನು ಕಾಪಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ಸತತ ವರ್ಷಗಳ ಕಾಲ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.

ಈ ಬಾರಿ, ಫೋರ್ಬ್ಸ್‌ ಪಟ್ಟಿಯಲ್ಲಿ ನಿರ್ಮಲಾ ಅವರು ಭಾರಿ ಮುನ್ನಡೆಯನ್ನು ಸಾಧಿಸಿ, ಕಳೆದ ವರ್ಷ 32ನೇ ಸ್ಥಾನದಿಂದ 28ನೇ ಸ್ಥಾನಕ್ಕೆ ಏರಿದ್ದಾರೆ. ಇದರಿಂದಲೇ ಅವರು ಭಾರತೀಯ ಮಹಿಳೆಯ ಶಕ್ತಿಯ ಪ್ರತೀಕವಾಗಿದ್ದಾರೆ.

ಹೊಸದಿಲ್ಲಿ:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪೈಕಿ ಸತತ ಆರುನೇ ಬಾರಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಫೋರ್ಬ್ಸ್‌ ಟಾಪ್‌ 100 ಪವರ್‌ಫುಲ್‌ ವುಮೆನ್‌-2024 ಪಟ್ಟಿಯಲ್ಲಿ, ಅವರು ಕಳೆದ ವರ್ಷದ 32ನೇ ಸ್ಥಾನದಿಂದ ಈ ಬಾರಿ 28ನೇ ಸ್ಥಾನಕ್ಕೆ ಮೇಲೇರಿದ್ದು, ಭಾರತದ ಮಟ್ಟಿಗೆ ಅತ್ಯಂತ ಶಕ್ತಿಶಾಲಿ ಮಹಿಳೆ ಎಂಬ ಹಿರಿಮೆಯನ್ನು ಉಳಿಸಿಕೊಂಡಿದ್ದಾರೆ.

ಈ ಸಾಧನೆಯ ಮೂಲಕ ಅವರು ಮಾತ್ರ ಆರ್ಥಿಕತೆಯಲ್ಲಿ ಮಾತ್ರವಲ್ಲ, ಜಾಗತಿಕ ನಾಯಕತ್ವದಲ್ಲಿಯೂ ಭಾರತೀಯ ಮಹಿಳೆಯ ಶಕ್ತಿ ಮತ್ತು ಪ್ರಭಾವವನ್ನು ತೋರಿಸಿದ್ದಾರೆ.

ಫೋರ್ಬ್ಸ್‌ ಮೋಸ್ವ್‌ ಪವರ್‌ಫುಲ್‌ ವುಮೆನ್‌-2024′ ಪಟ್ಟಿ ಬಿಡುಗಡೆಯಾಗಿದ್ದು, ವಿಶ್ವದ 100 ಮಂದಿ ಮಹಿಳೆಯರನ್ನು ಅತ್ಯಂತ ಪ್ರಭಾವಿ ಮಹಿಳೆಯರನ್ನಾಗಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರಲ್ಲದೆ ಎಚ್‌ಸಿಎಲ್‌ ಕಾರ್ಪೊರೇಷನ್‌ನ ಸಿಇಒ ರೋಷನಿ ನಾಡಾರ್‌ ಮಲ್ಹೋತ್ರಾ ಮತ್ತು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಮ್ದಾರ್‌ ಷಾ ಪ್ರಭಾವಿ ಮಹಿಳೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತೀಯರಾಗಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು 2024ರ ಜೂನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ, ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದ ಸುಮಾರು 4 ಟ್ರಿಲಿಯನ್‌ ಡಾಲರ್‌ (4 ಲಕ್ಷ ಕೋಟಿ ರೂ.) ಆರ್ಥಿಕತೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ. ಅರ್ಹವಾಗಿಯೇ ಅವರು ಪ್ರಭಾವಿ ಮಹಿಳೆಯ ಪಟ್ಟ ಗಿಟ್ಟಿದ್ದಾರೆ.

ರೋಷನಿ ನಾಡಾರ್‌ ಮಲ್ಹೋತ್ರಾ

ಎಚ್‌ಸಿಎಲ್‌ ಕಾರ್ಪೊರೇಷನ್‌ನ ಸಿಇಒ ರೋಷನಿ ನಾಡಾರ್‌ ಮಲ್ಹೋತ್ರಾ ಪಟ್ಟಿಯಲ್ಲಿ 81ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು 60ನೇ ಸ್ಥಾನದಲ್ಲಿದ್ದರು. ಮಲ್ಹೋತ್ರಾ ಅವರು ಎಚ್‌ಸಿಎಲ್‌ ಸಂಸ್ಥಾಪಕ ಮತ್ತು ಕೈಗಾರಿಕೋದ್ಯಮಿ ಶಿವ ನಾಡಾರ್‌ ಅವರ ಪುತ್ರಿಯಾಗಿದ್ದು. ನಾಡಾರ್‌ ಸ್ಥಾಪಿಸಿದ ಸುಮಾರು 5.33 ಲಕ್ಷ ಕೋಟಿ ರೂ. ಉದ್ಯಮದ ವ್ಯವಹಾರಗಳನ್ನು ರೋಷನಿ ನೋಡಿಕೊಳ್ಳುತ್ತಿದ್ಧಾರೆ.

ಕಿರಣ್‌ ಮಜುಂದಾರ್‌-ಶಾ

ಫೋರ್ಬ್ಸ್‌ ಮೋಸ್ವ್‌ ಪವರ್‌ಫುಲ್‌ ವುಮೆನ್‌ ಪಟ್ಟಿಯಲ್ಲಿ ಬೆಂಗಳೂರಿನ ಬಯೋಕಾನ್‌ ಸಂಸ್ಥೆ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ 82ನೇ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91ನೇ ಸ್ಥಾನವನ್ನು ಪಡೆದಿರುವ ಕಿರಣ್‌ ಮಜುಂದಾರ್‌-ಶಾ ಜೈವಿಕ ತಂತ್ರಜ್ಞಾನದಲ್ಲಿ ಟ್ರಯಲ್‌ಬ್ಲೇಜರ್‌ ಆಗಿ ಜನಪ್ರಿಯರಾಗಿದ್ದಾರೆ. ಕಿರಣ್‌ ಮಜುಂದಾರ್‌ ಶಾ ಭಾರತದ ಸೆಲ್ಫ್‌ ಮೇಡ್‌ ಶ್ರೀಮಂತ ಮಹಿಳೆಯಾಗಿದ್ದಾರೆ ಎಂದು ಫೋರ್ಬ್ಸ್‌ ನಿಯತಕಾಲಿಕ ಬಣ್ಣಿಸಿದೆ. 1978ರಲ್ಲಿ ಬಯೋಫಾರ್ಮಾಸ್ಯುಟಿಕಲ್‌ ಸಂಸ್ಥೆಯ ಮೂಲಕ ಅವರು ಬಯೋಕಾನ್‌ ಅನ್ನು ಸ್ಥಾಪಿಸಿದ್ದಾರೆ.

ಯುರೋಪಿಯನ್‌ ಕಮಿಷನ್‌ ಮುಖ್ಯಸ್ಥೆ ಉರ್ಸುಲಾ ವ್ಯಾನ್‌ ಡೆರ್‌ ಲೇಯೆನ್‌ ಮತ್ತೊಮ್ಮೆ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಮುಖ್ಯಸ್ಥೆ ಕ್ರಿಸ್ಟಿನಾ ಲಗಾರ್ಡೆ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಬಿಲ್‌ ಗೇಟ್ಸ್‌ ಅವರ ಮಾಜಿ ಪತ್ನಿ ಮಿಲಿಂದಾ ಫ್ರೆಂಚ್‌ ಗೇಟ್ಸ್‌ 8ನೇ ಸ್ಥಾನದಲ್ಲಿದ್ದಾರೆ. ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೋಸ್‌ ಅವರ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ 9 ನೇ ಸ್ಥಾನದಲ್ಲಿದ್ದಾರೆ. ಜನಪ್ರಿಯ ಪಾಪ್‌ ಗಾಯಕಿ ಟೇಲರ್‌ ಸ್ವಿಫ್ಟ್‌ 23ನೇ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back To Top